| ಜ್ಞಾನದ ಜೊತೆಗೆ ವಿವೇಚನಾಶಕ್ತಿ ಮುಖ್ಯ- ಡಾ. ಯೋಗಾನಂದ ಮೂಲೀಮಠ್. |
 |
ಪಸ್ತುತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದ ಜೊತೆಗೆ ವಿವೇಚನಾ ಶಕ್ತಿ ಇದ್ದರೆ ಭವಿಷ್ಯದಲ್ಲಿ ಉದ್ಯೋಗ ಪಡೆಯಲು ಸಹಾಯವಾಗುತ್ತದೆ ಎಂದು ಬೆಂಗಳೂರಿನ ಖ್ಯಾತ ವಿಜ್ಞಾನಿ ಡಾ. ಯೋಗಾನಂದ ಮೂಲೀಮಠ್ ಹೇಳಿದರು.
ಇತ್ತೀಚೆಗೆ ಉಜಿರೆಯ ಶ್ರೀ ಧ. ಮ. ಕಾಲೇಜಿನಲ್ಲಿ ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಎಂಬ ವಿಷಯದ ಕುರಿತು ಮಾತನಾಡಿದರು. ಕೇವಲ ಪರೀಕ್ಷೆಯ ಅಂಕಗಳಷ್ಟೇ ಅಲ್ಲದೆ ಜ್ಞಾನದ ಜೊತೆಗೆ ಉತ್ತಮ ಸಂವಹನ ಕೌಶಲ್ಯ, ವಚನ ಬದ್ಧತೆ, ಹೊಸತನವನ್ನು ಕಲಿಯುವ ಆಸಕ್ತಿ, ಆತ್ಮವಿಶ್ವಾಸವಿರಬೇಕು. ದಿನಪತ್ರಿಕೆಗಳನ್ನು ಓದುವ ಮೂಲಕ ದಿನನಿತ್ಯದ ವಿಚಾರದ ಕುರಿತು ಅರಿವು ಮೂಡುತ್ತದೆ. ಶ್ರದ್ದೆ ಹಾಗೂ ಪ್ರಾಮಾಣಿಕ ದುಡಿಮೆಯಿಂದ ಉದ್ಯೋಗದಲ್ಲಿ ಯಶಸ್ಸು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೆಲಸದ ಬಗ್ಗೆ ನಿರ್ದಿಷ್ಟ ಗುರಿ ಇರಬೇಕು. ಯಾವುದೇ ಕೆಲಸವನ್ನು ಪ್ರೀತಿಸುವ ಗುಣ ಬೆಳೆಸಿಕೊಂಡು ಸವಾಲುಗಳನ್ನು ಎದುರಿಸಲು ಸಿದ್ದರಿರಬೇಕು. ಉನ್ನತ ಶಿಕ್ಷಣದ ನಂತರ ಯಾವುದೇ ಸಂಸ್ಥೆಯಲ್ಲಿ ದುಡಿಯಬೇಕೆಂದೇನಿಲ್ಲ ನಾವೇ ಒಂದು ಸಣ್ಣ ಸಂಸ್ಥೆ ಸ್ಥಾಪಿಸಿ ಹಲವರಿಗೆ ಉದ್ಯೋಗ ನೀಡುವಂತ ಸಾಮರ್ಥ್ಯ ನಮ್ಮಲ್ಲಿರಬೇಕು. ಸಮಾಜದೊಂದಿಗೆ ಉತ್ತಮ ಸಂಬಂಧಹೊಂದಿದ್ದು, ನಾವು ಮಾಡುವ ಕೆಲಸದ ಮೇಲೆ ಪ್ರೀತಿ, ಆಸಕ್ತಿ ಇದ್ದರೆ ಎಲ್ಲವೂ ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರೊ. ದಿನೇಶ್ ಚೌಟ, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಡಾ.ಶಂಕರ್ ನಾರಾಯಣ್, ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದರು. ಉಪನ್ಯಾಸಕ ಸುವೀರ್ ಜೈನ್ ಸ್ವಾಗತಿಸಿ ವಂದಿಸಿದರು.
|
| ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ’ಇಂಗ್ಲೀಷ್ ಎಂ.ಎ’ ಪ್ರಾರಂಭ |
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ನೂತನವಾಗಿ ಇಂಗ್ಲೀಷ್ ಎಂ. ಎ ಕೋರ್ಸ್ ಪ್ರಾರಂಭಿಸಲು ಮಂಗಳೂರು ವಿಶ್ವ ವಿದ್ಯಾನಿಲಯ ಅನುಮತಿ ನೀಡಿದೆ. ಈ ಮೂಲಕ ಎಸ್.ಡಿ.ಎಂ ಕಾಲೇಜಿನಲ್ಲಿ ಪದವಿ ಹಂತದವರೆಗಿದ್ದ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಅವಕಾಶವನ್ನು ಸ್ನಾತಕೋತ್ತರ ವಿಭಾಗದವರೆಗೆ ವಿಸ್ತರಿಸಲಾಗಿದೆ.
ಸ್ನಾತಕೋತ್ತರ ವಿಭಾಗದಲ್ಲಿ ಒಟ್ಟು ೩೦ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ. ಈಗಾಗಲೇ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದ್ದು, ಪದವಿ ಹಂತದಲ್ಲಿ ಇಂಗ್ಲಿಷ್ ಐಚ್ಛಿಕ ವಿಷಯನ್ನಾಗಿ ಆಯ್ದುಕೊಂಡು ಶೇ. ೪೫ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕಾಲೇಜು ಕಚೇರಿಯಲ್ಲಿ ವಿಚಾರಿಸಲು ಕೋರಲಾಗಿದೆ.
ಸ್ನಾತಕೋತ್ತರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳುವ ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ನೂತನವಾಗಿ ಇಂಗ್ಲಿಷ್ ಎಂ.ಎ ಸೇರ್ಪಡೆಗೊಳ್ಳುವುದರೊಂದಿಗೆ ಇದೀಗ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಒಟ್ಟು ೮ ವಿಷಯಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೆ ಅವಕಾಶ ದೊರೆತಿದೆ ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |
| ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಎಸ್‌ಡಿಎಂನ 70ವಿದ್ಯಾರ್ಥಿಗಳು |
 |
ಉಜಿರೆ ಎಸ್.ಡಿ.ಎಮ್ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು ೨೦೧೨-೧೩ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ನೇಹಾ (ದ್ವಿತೀಯ ಬಿ.ಕಾಂ), ಅಶ್ವಲ್ ರೈ (ತೃತೀಯ ಬಿ.ಕಾಂ), ರವಿಕುಮಾರ್ (ತೃತೀಯ ಬಿ.ಕಾಂ) ಶ್ರಮದಿಂದ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ೩ ಪದಕಗಳು ದೊರೆತಿವೆ. ರಾಜ್ಯಸರ್ಕಾರದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ ನೇಹಾಳಿಗೆ ಲಭಿಸಿದೆಯಲ್ಲದೆ ತೃತೀಯ ಬಿ.ಕಾಂ.ನ ವಿನುತಾ, ದ್ವಿತೀಯ ಬಿ.ಎ-ಯ ರಮ್ಯ, ತೃತೀಯ ಬಿ.ಎ-ಯ ಭರತ್ ರಾಷ್ಟ್ರಮಟ್ಟದಲ್ಲಿ ಪದಕ ಪಡೆದಿದ್ದಾರೆ. ಈ ಸಾಲಿನಲ್ಲಿ ಕಾಲೇಜಿನ ಒಟ್ಟು ೭೦ ಕ್ರೀಡಾವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರ-ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಸಾಧನೆ ಮಾಡಿದ್ದಾರೆ.
|
| ಪತ್ರಕರ್ತರು ಭಾವುಕತೆಗೆ ಶರಣಾಗಬಾರದು - ನಾರಾಯಣ ಮೂರ್ತಿ |
 |
26-03-13 :ಮಾಧ್ಯಮದವರು ವೃತ್ತಿಗೆ ನಿಷ್ಠಾವಂತರಾಗಿರಬೇಕು. ಯಾವುದೇ ಭಾವುಕತೆಗೆ ಶರಣಾಗಬಾರದು’ ಉತ್ತಮ ಶಬ್ಧಕೋಶ ಬಲ್ಲವರು ಉತ್ತಮ ವರದಿಗಾರರಾಗುತ್ತಾರೆ ಎಂದು ಇ-ನಾಡು ಪತ್ರಿಕೆಯ ಕ್ರೀಡಾ ವರದಿಗಾರ ನಾರಾಯಣ ಮೂರ್ತಿ ತಿಳಿಸಿದರು.
ಅವರು ಉಜಿರೆ ಶ್ರೀ. ಧ.ಮಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮೀಡಿಯಾ ಮೆಸೆಂಜರಸ್ ಕ್ಲಬ್ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.
ಪತ್ರಕರ್ತರು ಆರೋಗ್ಯಕರವಾದ ಸಾರ್ವಜನಿಕ ಸಂಪರ್ಕವನ್ನು ಹೊಂದಿರಬೇಕು. ಅದರಲ್ಲೂ ಕ್ರೀಡಾ ವರದಿ ಮಾಡುವವರು ಪ್ರೀಡಾ ಪಟುಗಳೊಡನೆ ಉತ್ತಮ ಸಂಪರ್ಕ ಹೊಂದಿದ್ದಲ್ಲಿ ಮಾತ್ರ ಉತ್ತಮ ವರದಿ ಮಾಡಲು ಸಾಧ್ಯ. ಬಹು ಭಾಷೆ ಅರಿವಿರುವವರಿಗೆ ಕ್ರೀಡಾ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಅವರು ತಿಳಿಸದರು.
ಪತ್ರಿಕೋದ್ಯಮದಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ ಸಂಪರ್ಕ ಮತ್ತು ಸಂವಹನ ಅತ್ಯಗತ್ಯ. ಉತ್ತಮ ವರದಿಗಾರರಾಗಬೇಕಾದರೆ ಕೇವಲ ವಿಷಯದ ಕುರಿತು ಅರಿವದ್ದರೆ ಸಾಲದು ಅದರ ಪೂರ್ವಾಪರವೂ ತಿಳಿದರಿಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ್ ಹೆಗ್ಡೆ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.
ಉಪನ್ಯಾಸಕ ಸುನಿಲ್ ಹೆಗ್ಡೆ ಸ್ವಾಗತಿಸಿ ವಿದ್ಯಾರ್ಥಿ ಜೀವೇಂದ್ರ ಶೆಟ್ಟಿ ವಂದಿಸಿದರು. ನವ್ಯ ಅಯ್ಯನಕಟ್ಟೆ ನಿರೂಪಿಸಿದರು.
|
| ಕರ್ತವ್ಯದ ಜೊತೆ ಸೇವಾ ಮನೋವೃತ್ತಿಯನ್ನು ರೂಢಿಸಿಕೊಳ್ಳಬೇಕು: ಡಾ.ಹೆಗ್ಗಡೆ |
 |
23-03-13 :ನಾವು ಕರ್ತವ್ಯವನ್ನು ಸರಿಯಾಗಿ ಪಾಲಿಸಬೇಕು ಅದರ ಜೊತೆಯಲ್ಲಿಯೆ ಸೇವಾ ಮನೋವೃತ್ತಿಯನ್ನು ಹೆಚ್ಚೆಚ್ಚು ರೂಢಿಸಿಕೊಂಡು ನಾವು ಕಾರ‍್ಯ ಪ್ರವೃತ್ತರಾಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅವರು ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ನಮಗೆ ದುಡಿಯುವವರ ಪರಿಚಯ ಚೆನ್ನಾಗಿ ತಿಳಿದಿರಬೇಕು. ಆದರೆ ನಾವು ಹತ್ತಿರದಲ್ಲಿರುವ ಕ್ಷೇತ್ರವನ್ನು ಮರೆತು ಬಿಡುತ್ತೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ನಿಷ್ಠೆಯಿಂದ ಕೆಲಸ ಮಾಡಿ ಭಗವಂತನ ಕೃಪೆಯನ್ನು ಪಡೆಯಬೇಕು , ಅದರಲ್ಲೂ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುವವರು ಇದನ್ನು ಚಿಂತಿಸಲೇಬೇಕು. ಮಾನವೀಯ ಸಂಬಂಧಗಳಿಗೆ ಹೆಚ್ಚು ಬೆಲೆ ನೀಡಬೇಕು. ಉಪನ್ಯಾಸಕರು ನೀರಸವಾದ ವಿಷಯವನ್ನು ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂತೆ ಮಾಡಬೇಕು ಆ ಮೂಲಕ ಮಕ್ಕಳ ಮನಸ್ಸನ್ನು ಕೇಂದ್ರಿಕರಿಸಬೇಕು ಎಂದು ಸಲಹೆಯನ್ನಿತ್ತರು.
ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೋ. ಎಸ್ ಪ್ರಭಾಕರ್ ಹಾಗೂ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಯಶೋವರ್ಮ ವೇದಿಕೆ ಮೇಲೆ ಉಪಸ್ಥಿತರಿದ್ದರು. ಹೇಮಾವತಿ ಹೆಗ್ಗಡೆ, ಸೋನಿಯಾ ಯಶೋವರ್ಮ, ಆಡಳಿತಾಧಿಕಾರಿ ಜೀವಂಧರ ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅಲ್ಲದೆ ಕಾಲೇಜಿನ ನಿವೃತ್ತ ಉಪನ್ಯಾಸಕರು ಈ ಕೂಟದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಉಪನ್ಯಾಸಕರನ್ನು ಅಭಿನಂದಿಸಲಾಯಿತು. ನಂತರದಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಂದ ವಿಶೇಷವಾದ ಸಾಂಸ್ಕೃತಿಕ ಕಾರ‍್ಯಕ್ರಮ ಜರುಗಿತು. ಗಣಿತ ವಿಭಾಗದ ಮುಖ್ಯಸ್ಥ ಪ್ರೋ. ಪ್ರಕಾಶ್ ಪ್ರಭು ಗಾಯನ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಯವರ ನೃತ್ಯ ಗಮನ ಸೆಳೆಯಿತು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕುಮಾರ್ ಹೆಗ್ಡೆ ನಿರೂಪಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕ ಕೆದಿಲ್ಲಾಯ ವಂದಿಸಿದರು. ವಾರ್ಷಿಕ ಸ್ನೇಹಕೂಟದ ಅಂಗವಾಗಿ ಎಲ್ಲಾ ಸಿಬ್ಬಂದಿಗಳಿಗೂ ಬೆಳದಿಂಗಳ ಊಟ ಆಯೋಜಿಸಲಾಗಿತ್ತು.
|
| ಶಿಸ್ತುಬದ್ಧ ಜೀವನದಿಂದ ಸದೃಢ ಆರೋಗ್ಯ : ಡಾ. ಬಿ. ಎ. ಕುಮಾರ ಹೆಗ್ಗಡೆ |
 |
22-03-13 : ಆರೋಗ್ಯವಂತ ಮಾನವ ಮಾತ್ರ ಸಮಾಜದಲ್ಲಿ ಸಬಲವಾಗಿ ಬದುಕಲು ಸಾಧ್ಯ. ಶಿಸ್ತುಬದ್ಧ ಜೀವನ ಅವನಿಗೆ ಸದೃಢವಾದ ಆರೋಗ್ಯವನ್ನು ನೀಡುತ್ತದೆ ಎಂದು ಸಸ್ಯಶಾಸ್ತ್ರ ಉಪನ್ಯಾಸಕರಾದ ಡಾ. ಬಿ. ಎ. ಕುಮಾರ ಹೆಗ್ಗಡೆ ಹೇಳಿದರು.
ಇತ್ತೀಚೆಗೆ ಎಸ್.ಡಿ.ಎಂ. ಕಾಲೇಜು, ಉಜಿರೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಮ್ಮಿಕೊಂಡ ಸಿಬ್ಬಂದಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾನವನ ಜೀವನ ಆರೋಗ್ಯದ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ-ಪ್ರಾಂಶುಪಾಲರಾದ ಪ್ರೊ. ದಿನೇಶ್ ಚೌಟ ವಹಿಸಿದ್ದರು. ಕೆ.ಎಮ್.ಸಿ. ಆಸ್ಪತ್ರೆ, ಮಂಗಳೂರಿನ ವೈದ್ಯೆ ಡಾ. ಅಶ್ವಿನಿ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಯೋಜನಾಧಿಕಾರಿಗಳಾದ ಶ್ರೀ ಶಶಿಕಾಂತ್ ಕುರೋಡಿ ಸ್ವಾಗತಿಸಿ, ಶ್ರೀಮತಿ ಆಲ್ಫೋನ್ಸಮ್ಮ ವಂದಿಸಿದರು. ಕು. ಪವಿತ್ರಾ ಕಾರ್ಯಕ್ರಮ ನಿರ್ವಹಿಸಿದರು.
|
| ಹಕ್ಕುಗಳನ್ನು ದುರುಪಯೋಗ ಪಡಿಸುವವರೇ ಜಾಸ್ತಿ: ಪ್ರೊ. ಪ್ರಭಾಕರ್ |
 |
21-03-13: ಹಕ್ಕುಗಳನ್ನು ಜನರ ಒಳಿತಿಗಾಗಿ ರೂಪುಗೊಳ್ಳುತ್ತಿದೆಯಾದರೂ ಅದನ್ನು ದುರುಪಯೋಗ ಪಡಿಸಿಕೊಳ್ಳುವವರೇ ಜಾಸ್ತಿ. ಸ್ವತಂತ್ರರಾಗಬೇಕೆಂಬ ದುರಾಸೆ ಜನರಲ್ಲಿ ಹಕ್ಕುಗಳನ್ನು ದುರುಪಯೋಗ ಪಡಿಸುವಂತೆ ಮಾಡುತ್ತದೆ ಎಂದು ಎಸ್.ಡಿ.ಎಂ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್ ಪ್ರಭಾಕರ ತಿಳಿಸಿದರು.
ಅವರು ಉಜಿರೆ ಶ್ರೀ ಧ. ಮಂ ಕಾಲೇಜಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ಉಜಿರೆ ಎಸ್.ಡಿಎಂ ಕಾಲೇಜಿನ ಡಾ. ಹಾ.ಮಾ.ನಾ ಸಂಶೋಧನಾ ಕೇಂದ್ರ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ಏರ್ಪಡಿಸಲಾದ ಹಕ್ಕುಗಳ ಪರಿಭಾಷೆಯಲ್ಲಿ ಅಭಿವೃದ್ಧಿ ಎಂಬ ಮೂರು ದಿನಗಳ ರಾಷ್ಟ್ರೀಯ ವಿಚಾರ ಕಾರ್ಯಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಹಕ್ಕುಗಳು ಭಾರತ ದೇಶದಲ್ಲಿ ಅನಾದಿ ಕಾಲದಿಂದಲೂ ಇತ್ತು. ಅದ್ನು ಯಾವುದೇ ದೇಶದಿಂದ ಬಳುವಳಿ ಪಡೆದದ್ದಲ್ಲ. ಹಕ್ಕಿಗಾಗಿ ಹೋರಾಟ ಪುರಾಣದಲ್ಲೂ ಉಲ್ಲೇಖವಾಗಿದೆ. ರುಡ್‌ಸೆಟ್, ರತ್ನಮಾನಸದಂತಹ ಸಂಸ್ಥೆಗಳು ಹಕ್ಕಿನ ವಿಷಯದ ಕುರಿತು ತಿಳಿ ಹೇಳುತ್ತಿದೆ. ಎಂದರು.
ಸಮಾಜದಲ್ಲಿ ಎರಡು ವರ್ಗದ ಜನರಿದ್ದು ಒಂದು ಹಕ್ಕಿಗಾಗಿ ಶ್ಮಿಸಿ ತಿಳಿ ಹೇಳುವಮತಹ ಕೆಲಸಗಳನ್ನು ಮಾಡಿದರೆ ಮತ್ತೊಂದು ವರ್ಗ ಜೂಜು ಡ್ರಗ್ಸ್ ಹಾಗು ಇನ್ನಿತರ ಕೆಟ್ಟ ಹವ್ಯಾಸಗಳಿಂದ ಹಕ್ಕನ್ನು ದುರುಪಯೋಗ ಪಡಿಸುತ್ತಿದೆ. ಹಕ್ಕುಗಳಿಗೂ ಅದರದ್ದೇ ಆದ ಇತಿ ಮಿತಿಗಳಿವೆ ಅದನ್ನು ಅರಿತು ಸದ್ಬಳಕೆಗಾಗಿ ಹಕ್ಕುಗಳನ್ನು ಚಲಾಯಿಸಬೇಕು. ಕಾರ್ಯಕ್ರಮ ಎಲ್ಲರಲ್ಲೂ ಈ ಕುರಿತು ಚಿಂತನೆ ಮೂಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಹಂಪಿ ವಿ.ವಿಯ ಅಭಿವೃದ್ಧಿ ಅಧ್ಯನ ವಿಭಾಗದ ಸಹ ಪ್ರಾಧ್ಯಾಪಕ, ಕಾರ್ಯಗಾರದ ಸಂಚಾಲಕ ಡಾ. ಹೆಚ್.ಡಿ ಪ್ರಶಾಂತ್, ಅರ್ಥಶಾಸ್ತ್ರ ಮತ್ತು ಗ್ರಾಮೀಣಾಭಿವೃದ್ಧಿ ಮುಖ್ಯಸ್ಥ ಪ್ರೊ. ಟಿ ಕೃಷ್ಣಮೂರ್ತಿ, ಹಾಗು ಕಾರ್ಯಗಾರದ ಸ್ಥಳೀಯ ಸಂಚಾಲಕ ಡಾ. ಎ. ಜಯಕುಮಾರ್ ಶೆಟ್ಟಿ, ಉಜಿರೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ ಸಂಪತ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು
ಡಾ. ಜಯಕುಮಾರ್ ಶೆಟ್ಟಿ ಸ್ವಾಗತಿಸಿದರು. ಡಾ. ದಿವಾ ಕೊಕ್ಕಡ ವಂದಿಸಿ ನಿರೂಪಿಸಿದರು.
|
| ವಿದ್ಯಾರ್ಥಿಗಳು ಭ್ರಮೆಯಿಂದ ಹೊರಬರಬೇಕು: ಡಾ. ಹೆಗ್ಗಡೆ |
 |
 |
20-03-13 : ವಿದ್ಯಾರ್ಥಿಗಳಿಗೆ ಅವಕಾಶಗಳು ಎಲ್ಲೆಡೆ ಇರುತ್ತವೆ. ಆದರೂ ಅದನ್ನು ಗುರುತಿಸಿ ಮುನ್ನಡೆಯುವ ಜಾಣ್ಮೆ ವಿದ್ಯಾರ್ಥಿಗಳಿರಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ/ ಡಿ . ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಇತ್ತೀಚೆಗೆ ಎಸ್ ಡಿ ಎಂ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ಹೆಚ್ಚಿನ ವಿದ್ಯಾರ್ಥಿಗಳು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಸಮಯದ ಸದುಪಯೋಗ ಕಡಿಮೆಯಾಗುತ್ತಿದೆ. ಜೊತೆಗೆ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವಿನ ಸಂಬಂಧಗಳು ಕುಸಿಯುತ್ತಿದೆ ಎಂದರು.
ಕಾರ‍್ಯಕ್ರಮದ ಮುಖ್ಯ ಅತಿಥಿ ಸ್ಥಾನ ವಹಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ/ ಸಿ.ಎಸ್. ಶರ್ಮ ಎಸ್ ಡಿ ಎಂ ಕಾಲೇಜು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಇಂತಹ ಪ್ರಯತ್ನಗಳು ಎಲ್ಲಾ ಕಾಲೇಜುಗಳಲ್ಲಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿ ಹಾಗೂ ಪ್ರಾಧ್ಯಾಪಕರುಗಳನ್ನು ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ‍್ಯಕ್ರಮ ನೆರೆದವರನ್ನು ಮನ ರಂಜಿಸಿತು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ\ ಬಿ ಯಶೋವರ್ಮ , ಎಸ್ ಡಿ ಎಂ ಎಜುಕೇಷನ್ ಸೊಸೈಟಿಯ ಕಾರ‍್ಯದರ್ಶಿ ಹರ್ಷೇಂದ್ರಕುಮಾರ್ ,ಸುಪ್ರಿಯಾ ಹರ್ಷೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಡಾ/ ಬಿ ಯಶೋವರ್ಮ ಸ್ವಾಗತಿಸಿ, ಉಪನ್ಯಾಸಕ ಕೃಷ್ಣಮೂರ್ತಿ ವಂದನಾರ್ಪಣೆಗೈದರು. ಡಾ/ ಬಿ ಪಿ ಸಂಪತ್ ಕುಮಾರ್ ಕಾರ‍್ಯಕ್ರಮ ನಿರೂಪಿಸಿದರು.
|
| ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆ |
 |
19-03-13: ಉಜಿರೆ ಶ್ರೀ.ಧ.ಮಂ. ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣದಲ್ಲಿ ಸುಸಜ್ಜಿತ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟನೆಗೊಂಡಿತು.
ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಯಶೋವರ್ಮ ಅಧ್ಯಕ್ಷತೆಯಲ್ಲಿ ಶ್ರೀ.ಧ.ಮಂ. ಶಿಕ್ಷಣ ಸಂಸ್ಥಗಳ ಕಾರ್ಯದರ್ಶಿ ಡಿ.ಹರ್ಷೇಂದ್ರ ಹೆಗ್ಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಬಿ.ಯಶೋವರ್ಮ ಸ್ವಾಗತಿಸಿ, ಕಾಲೇಜಿನ ದೈ.ಶಿ. ವಿಭಾಗದ ಕಾರ್ಯದರ್ಶಿ ಪ್ರೊ.ಬಾಲಭಾಸ್ಕರ್ ವಂದಿಸಿದರು. ಸಸ್ಯಶಾಸ್ತ್ರ ವಿಭಾಗದ ಕುಮಾರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ಸುಪ್ರಿಯ ಹರ್ಷೇಂದ್ರ ಹೆಗ್ಗಡೆ, ಶ್ರೇಯಸ್ ಹೆಗ್ಗಡೆ, ಕಾಲೇಜಿನ ಉಪಪ್ರಾಂಶುಪಾಲ ದಿನೇಶ್ ಚೌಟ, ಕ್ರೀಡಾನಿರ್ದೇಶಕ ಎಚ್.ರಮೇಶ್, ಉಪನ್ಯಾಸಕರು, ತರಬೇತುದಾರರು ಹಾಗು ಕ್ರೀಡಾವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
|
| ಜೀವನ ಕ್ರಿಕೇಟ್ ಆಟದಂತಲ್ಲ - ಡಾ. ಎಚ್. ಮಾಧವ್ ಭಟ್ |
|
 |
 |
 |
16-03-13 : ಜಗತ್ತಿನಲ್ಲಿ ಗೆಲುವನ್ನು ಅಭಿನಂದಿಸುವವರು ಹಲವರಾದರೂ, ಸೋಲಿಗೆ ಸ್ವೀಕರಿಸುವವರು ಬೆರಳೆಣಿಕೆಯಷ್ಟು. ಸೋಲು ಜೀವನದ ಕೊನೆಯಲ್ಲ. ಚಿಗುರಿನಂತೆ ಮತ್ತೆ ಹುಟ್ಟುವ ಕಲೆಯನ್ನು ಅಧ್ಯಾಪಕರು, ಹೆತ್ತವರು ತಮ್ಮ ಮಕ್ಕಳಿಗೆ ಕಲಿಸಿದಲ್ಲಿ ಸೋಲಿನಿಂದ ಎದ್ದೇಳುವ ಶಕ್ತಿ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೋರಾಡುವ ಛಲ ಮಕ್ಕಳಲ್ಲಿ ಪುಟಿದೇಳುತ್ತದೆ. ಹೊರತು ಜೀವನವನ್ನು ಕ್ರಿಕೇಟ್ ಆಟದಂತೆ ಒಮ್ಮೆ ಪೆವಿಲಿಯನ್ ಸೇರಿದರೆ ಮುಗಿಯಿತು ಎಂದುಕೊಂಡರೆ ಜೀವನದಲ್ಲಿ ಬದಲಾವಣೆ ತರುವುದು ಕಷ್ಟ ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್ ಮಾಧವ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಏರ್ಪಡಿಸಿದ್ದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಇಂದಿನ ಯುವ ಜನತೆ ತಕ್ಕ ಕಾಲಕ್ಕೆ ಸಮಾಜದಲ್ಲಿ ನಡೆಯುತ್ತಿರುವ ನೀಚ ಶಕ್ತಿಗಳ ವಿರುದ್ದ ದನಿ ಎತ್ತಬೇಕು. ಶಿಕ್ಷಣ ಕೇವಲ ತರಗತಿಗಳಿಗೆ ಅಂಟಿಕೊಳ್ಳದೆ, ಜ್ಞಾನದ ಅಭಿವೃದ್ಧಿಗೆ ಬಳಕೆಯಾಗಬೇಕು. ಶಿಕ್ಷಣವನ್ನು ಹಂಚಿದಲ್ಲಿ ಮಾತ್ರ ಶಿಕ್ಷಕ ಎನ್ನುವ ಅರ್ಹತೆ ಬರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರಿಗೆ ಬಹುಮಾನ ವಿತರಣೆ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಯಶೋವರ್ಮ ಶಿಕ್ಷಣದಲ್ಲಿ ಹೆಚ್ಚಿನ ಬದಲಾವಣೆ ಬರಬೇಕಾಗಿದೆ, ಶಿಕ್ಷಣ ಇನ್ನೂ ಪ್ರಬಲವಾಗಬೇಕಾಗಿದೆ ಎಂದರು. ಈ ವೇಳೆ ಅವರು ವಿದ್ಯಾರ್ಥಿ ಕ್ರೀಡಾ ಸಂಚಿಕೆ ಸ್ಪೂರ್ತಿ, ಬಿ.ಸಿ.ಎ ವಿದ್ಯಾರ್ಥಿ ಅರುಣ್ ಕುಮಾರ್ ನಿರ್ದೇಶಿಸಿದ ಸೆರಿಬ್ರಲ್ ಫಾಲ್ಸಿ ಎಂಬ ಸಾಕ್ಷ್ಯಚಿತ್ರ ಮತ್ತು ಕಾಲೇಜಿನ ಕನ್ನಡ ಸಂಘದ ವಿದ್ಯಾರ್ಥಿ ಕಥಾ ಸಂಕಲನ ನೂರಾರು ಕನಸು ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು. ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿ ಸಂಘದ ನಾಯಕ ಯತೀಶ್ ಶೆಟ್ಟಿ ಸ್ವಾಗತಿಸಿದರು, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಈಶ್ವರ ಚಂದ್ರಿಕ ವಂದಿಸಿದರು.
|
| ಪತ್ರಕರ್ತರಾಗುವವವರು ಸೂಕ್ಷ್ಮ ಸಂವೇದನೆ ಅರಿತಿರಬೇಕು. |
 |
15-03-13: ಪತ್ರಕರ್ತರಾಗುವವರು ಸೂಕ್ಷ್ಮ ಸಂವೇದನೆ ಅರಿತಿರಬೇಕು. ಭೂತ ಭವಿಷ್ಯತ್ ವರ್ತಮಾನದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡಿರಬೇಕು. ಪತ್ರಿಕೋದ್ಯಮ ಪರಿಭಾಷಷೆಯನ್ನು ಗ್ರಹಿಸುವ ಕೌಶಲ್ಯ ಅರಿತಿರಬೇಕು ಎಂದು ಖ್ಯಾತ ಅಂಕಣಕಾರ ನರೇಂದ್ರ ದೇರ್ಲ ತಿಳಿಸಿದರು
ಅವರು ಉಜಿರೆ ಶ್ರೀ. ಧ.ಮ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಸಹಕಾರದೊಂದಿಗೆ ಚೇತನ್ ಕೆ.ಸಿ ನಿರ್ಮಾಣದ ಜಾಲಾ ದಿ ಟ್ರಾಪ್ ಚಿತ್ರದ ಸಿ.ಡಿ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಈಗಿನ ಪತ್ರಿಕೋದ್ಯಮ ಕೃಷಿಯಲ್ಲಿ ಕಲಾತ್ಮಕ ಬರಹಗಳು ಕಡಿಮೆಯಾಗುತ್ತಿವೆ. ವರದಿ ನೀಡುವ ಬರದಲ್ಲಿ ವರದಿಯ ಗ್ರಹಿಕೆ ಹಾದಿ ತಪ್ಪುತ್ತಿದೆ. ಮಾತುಗಾರನು ಮಾತುಗಳ ಬದಲು ಇನ್ಯಾವುದೊ ಮಾತುಗಳು ಪತ್ರಿಕೆಯಲ್ಲಿ ಮುದ್ರಿತವಾಗುತ್ತಿವೆ. ಇದು ವಿಷಾದನೀಯ.
ಇಂದಿನ ಬರಹಗಳಲ್ಲಿ ತೂಕ ಕಡಿಮೆಯಾಗಿದೆ ಯು ಪತ್ರಕರ್ತರು, ಬರಹಗಾರರು ಬರಹಗಳಿಗೆ ಮೌಲ್ಯವನ್ನು ತುಂಬಬೇಕಿದೆ ಎಂದು ನುಡುದರು.
ಮೌನಕ್ಕೂ ಅಕ್ಷರ ತುಂಬಿಸುವ ಕೆಲಸ ನಡೆದರೆ ಪತ್ರಿಖದ್ಯಮದಲ್ಲಿ, ಬರವಣಿಗೆಯಲ್ಲಿ ಉತ್ತುಂಗಕ್ಕೆ ಏರಬಹುದು. ಗ್ರಾಮೀಣ ಪ್ರದೇಶದ ವಿದ್ಯಾಥಿಗಳು ಈ ನಿಟ್ಟಿನಲ್ಲಿ ಹೆಚಿನ ಶ್ರಮ ಪಡೆಬೇಕು, ಹೆಚು ಅಧ್ಯಯನ ಶೀಲರಾಗಬೇಕು ಎಂದು ತಿಳಿಸಿದರು.
ಪತ್ರಿಕೋದ್ಯಮದ ಸೂಕ್ಷ್ಮ ಸಂವೇದನೆ ಅರಿಯಬೇಕು. ಬರಹವೂ ಕೇವಲ ಕಾಲ್ಪನಿಕವಾಗದೆ ವಾಸ್ತವತೆಯೆಂಬ ಸೂಕ್ಷ್ಮತೆಯನ್ನು ಒಳಗೊಂಡಿರಬೇಕು. ಎಂದರು
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಭಾಸ್ಕರ್ ಹೆಗ್ಡೆ, ಪತ್ರಿಕೋದ್ಯಮದ ಅಧ್ಯಾಪಕರು. ಚೇತನ್ ಕೆ.ಸಿ ಮತ್ತು ಅವರ ತಾಯಿ ಉಪಸ್ಥಿತರಿದ್ದರು. |
| ಸಂಸ್ಕಾರವೆಂಬ ಮೂಲಭೂತ ಶಿಕ್ಷಣ ನಮಗೆ ದೊರೆಯುವಂತಾಗಬೇಕು: ಕೆ.ಎಂ.ನಟರಾಜ್ |
 |
 |
10-03-13: ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ತನ್ನ ಕಾರ್ಯವನ್ನು ಅರಿತು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು. ಯಾವುದೇ ಒಂದು ಅಂಗವು ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದ್ದೇ ಆದಲ್ಲಿ ಸಮಾಜ ಅಧೋಗತಿಗೆ ತಳ್ಳಲ್ಪಡುತ್ತದೆ. ಸಮಾಜದ ಪ್ರತಿಯೊಬ್ಬರೂ ತಮ್ಮ ಹಕ್ಕು ಕರ್ತವ್ಯಗಳನ್ನು ನಿರ್ವಹಿಸಿದರೆ ನಮ್ಮ ಸಮಾಜ ಸ್ವಾಸ್ಥ್ಯ ನಾಗರಿಕ ಸಮಾಜವಾಗುವುದು ಎಂದು ಕರ್ನಾಟಕ ಸರ್ಕಾರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕೆ. ಎಂ. ನಟರಾಜನ್ ತಿಳಿಸಿದರು.
ಅವರು ಶ್ರೀ. ಧ. ಮಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಯುವ ಜನರಿಗಾಗಿ ಕಾನೂನು ಜಾಗೃತಿ ಶಿಬಿರದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ನ್ಯಾಯಾಂಗ ತನ್ನ ಮಿತಿಯನ್ನು ಮೀರಿ ಸಾಗುತ್ತಿದೆ, ಇದು ಇದೇ ರೀತಿ ಮುಂದುವರಿದಲ್ಲಿ ನ್ಯಾಯಾಂಗ ಠೀಕೆ ಒಳಗಾಗುತ್ತದೆ. ಪ್ರಚಾರಕ್ಕಾಗಿ ಮಾಡುವ ಕೆಲಸವನ್ನು ಬಿಡಬೇಕು.ಸಮಾಜದಲ್ಲಿ ಸತ್ಪ್ರಜೆಯಾಗಿ ಬಾಳಬೇಕಿದ್ದರೆ ನಮ್ಮನ್ನು ನಾವು ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ಹಾಗೂ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಶ್ರೀ ನಟರಾಜ್ ಅವರ ನೇತೃತ್ವದಲ್ಲಿ ಪ್ರೊ| ಎನ್. ಜೆ. ಕಡಂಬ ಅವರನ್ನು ಸನ್ಮಾನಿಸಿದರು. ನ್ಯಾಯವಾದಿ ಪ್ರತಾಪ್ ಸಿಂಹ ನಾಯಕ್ ಅವರು ಕಡಂಬ ಅವರನ್ನು ಪರಿಚಯಿಸಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ/ ಬಿ. ಯಶೋವರ್ಮ, ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ‍್ಯದರ್ಶಿ ಪ್ರೊ. ಎಸ್. ಪ್ರಭಾಕರ್, ಎಸ್ ಡಿ ಎಂ ಕಾನೂನು ಕಾಲೇಜಿನ ಸ್ಥಾಪಕಪ್ರಾಂಶುಪಾಲರಾದ ಪ್ರೊ| ಎನ್.ಜೆ. ಕಡಂಬವ, ರೋಟರಿ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಡಾ/ಬಿ ಯಶೋವರ್ಮ ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಮೋಹನ್ ನಾರಾಯಣ್ ವಂದಿಸಿದರು. ದೀಕ್ಷಿತಾ ಹಾಗೂ ಚಂದ್ರಹಾಸ ಕಾ ್ಯಕ್ರಮ ನಿರೂಪಿಸಿದರು. |
| |
| ಲೆಫ್ಟಿನೆಂಟ್ ಶ್ರೀಧರ್ ಭಟ್‌ರಿಗೆ ಮುಖ್ಯಮಂತ್ರಿಗಳ ಪ್ರಶಂಸಾ ಪತ್ರ |
|
06-03-13 : ದೇಶದ ವಿವಿಧ ಭಾಗಗಗಳಲ್ಲಿ ನಡೆದ ರಾಷ್ಟ್ರಮಟ್ಟದ ಎನ್.ಸಿ.ಸಿ ಶಿಬಿರ, ವಿವಿಧ ಕಾರ್ಯಕ್ರಮ ಹಾಗೂ ಸ್ಪರ್ಧೆಗಳಲ್ಲಿ ಬೆಂಗಳೂರು ಹಾಗೂ ಗೋವಾ ಡೈರೆಕ್ಟೆರೇಟ್‌ಗಳನ್ನು ಪ್ರತಿನಿಧಿಸಿ ಹಲವು ಪ್ರಶಸ್ತಿ, ಪ್ರಶಂಸೆಗಳನ್ನು ಕರ್ನಾಟಕ ರಾಜ್ಯಕ್ಕೆ ಗಳಿಸಿಕೊಟ್ಟ ಹಿನ್ನೆಲೆಯಲ್ಲಿ ಘನ ಕರ್ನಾಟಕ ಸರ್ಕಾರ ಉಜಿರೆ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀಧರ್ ಭಟ್ ಅವರಿಗೆ ಮುಖ್ಯಮಂತ್ರಿಗಳ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಿದೆ. ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್ ಶ್ರೀಧರ್ ಭಟ್ ಅವರಿಗೆ ’೫ ಕರ್ನಾಟಕ ನೇವಲ್ ಯುನಿಟ್’ನ ಕಮಾಂಡಿಂಗ್ ಆಫೀಸರ್ ಕಮಾಂಡರ್ ರಾಮಚಂದ್ರನ್ ಮುಖ್ಯಮಂತ್ರಿಗಳ ಪರವಾಗಿ ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ.
೨೦೦೨ ರಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ ವಿಭಾಗದಲ್ಲಿ ’೫ ಕರ್ನಾಟಕ ನೇವಲ್ ಯುನಿಟ್’ನ ಸಬ್‌ಲೆಫ್ಟಿನೆಂಟ್ ಆಗಿ ಅಧಿಕಾರ ವಹಿಸಿಕೊಂಡ ಕಾಲೇಜಿನ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀಧರ್ ಭಟ್ ೨೦೧೧-ರಲ್ಲಿ ಲೆಫ್ಟಿನೆಂಟ್ ಹುದ್ದೆಗೆ ಭಡ್ತಿ ಪಡೆದಿದ್ದಾರೆ. ದೇಶದ ವಿವಿಧೆಡೆ ನಡೆದ ಎನ್.ಸಿ.ಸಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಕರ್ನಾಟಕ ಹಾಗೂ ಗೋವಾ ಡೈರೆಕ್ಟೆರೇಟ್‌ನ್ನು ಪ್ರತಿನಿಧಿಸಿರುವ ಶ್ರೀಧರ್ ಭಟ್ ಹಲವು ಸಾಧನೆಗಳನ್ನು ದಾಖಲಿಸಿರುವುದು ವಿಶೇಷ.
ವ್ಯಕ್ತಿಗತ ಸಾಧನೆ:
೨೦೦೧ರಲ್ಲಿ ಕೊಚ್ಚಿನ್‌ನಲ್ಲಿ ನಡೆದ ಫ್ರೀ-ಕಮಿಷನ್ ತರಬೇತಿಯನ್ನು ’ಎ’ ಶ್ರೇಣಿಯೊಂದಿಗೆ ಪೂರೈಸಿರುತ್ತಾರೆ.
ದೇಶದ ನಾನಾ ಭಾಗಗಳಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯ ಶಿಬಿರದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ, ಅನೇಕ ಪ್ರಶಸ್ತಿಗಳನ್ನು ತರುವಲ್ಲಿ ಮಾರ್ಗದರ್ಶನ ನೀಡಿರುತ್ತಾರೆ.
೨೦೦೭ ರಲ್ಲಿ ವಿಶಾಖಪಟ್ಟಣಂನಲ್ಲಿ ನಡೆದ ಎನ್.ಸಿ.ಸಿ ಪುನಶ್ಚೇತನ ಶಿಬಿರವನ್ನು ’ಎ’ ಶ್ರೇಣಿಯೊಂದಿಗೆ ಪೂರೈಸಿರುತ್ತಾರೆ.
ಬಂಡಾಜೆ, ಕುದುರೆಮುಖ, ಕುಮಾರ ಪರ್ವತ, ಚಾರ್ಮಾಡಿ, ಎಡಕುಮೇರಿ, ಜಮಲಾಬಾದ್ ಮೊದಲಾದೆಡೆಗಳಲ್ಲಿ ಎನ್.ಸಿ.ಸಿ ಉಪವಿಭಾಗದ ಏಳಕ್ಕೂ ಹೆಚ್ಚು ಚಾರಣಗಳನ್ನು ನಡೆಸಿರುತ್ತಾರೆ.
ಹಲವು ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರುವಲ್ಲಿ ಪ್ರೇರೇಪಣೆ ನೀಡಿರುತ್ತಾರೆ.
ಎನ್.ಸಿ.ಸಿ ಅಧಿಕಾರಿಯಾಗಿ ಲೆ| ಶ್ರೀಧರ್ ಭಟ್ ಅವರ ಮಾರ್ಗದರ್ಶನ ಮತ್ತು ಪ್ರೇರೇಪಣೆಯಿಂದ ಎನ್.ಸಿ.ಸಿ ಕೆಡೆಟ್‌ಗಳು ಅಪರೂಪದ ಈ ಕೆಳಗಿನ ಸಾಧನೆಗಳನ್ನು ಮಾಡಿರುತ್ತಾರೆ.
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಈವರೆಗೆ ೨೪ ಕೆಡೆಟ್‌ಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.
ವಿಶಾಖಪಟ್ಟಣಂನಲ್ಲಿ ನಡೆದ ’ನವಸೈನಿಕ್ ಶಿಬಿರ’ದಲ್ಲಿ ಇದುವರೆಗೆ ೨೭ ಕೆಡೆಟ್‌ಗಳು ಭಾಗವಹಿಸಿ ಅನೇಕ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತಂದಿರುತ್ತಾರೆ.
’ಯುವ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ’ದಡಿಯಲ್ಲಿ ಈವರೆಗೆ ನಮ್ಮ ಕಾಲೇಜಿನ ನಾಲ್ಕು ಕೆಡೆಟ್‌ಗಳು ವಿದೇಶ ಸಂಚಾರಕ್ಕೆ ಆಯ್ಕೆಯಾಗಿದ್ದು, ಸಿಂಗಾಪೂರ್, ಥೈಲ್ಯಾಂಡ್, ಇಂಡೋನೇಷಿಯಾ, ಮಲೇಷಿಯಾ ಮೊದಲಾದ ದೇಶಗಳಿಗೆ ಭೇಟಿ ನೀಡಿರುತ್ತಾರೆ.
|